ಅಮಿಶ್ ತ್ರಿಪಾಠಿ ಭಾರತೀಯ ಲೇಖಕರು. ಇವರ ಪುಸ್ತಕಗಳಾದ ದಿ ಇಮ್ಮಾರ್ಟಲ್ಸ್ ಆಫ್ ಮೆಲುಹ, ದಿ ಸೀಕ್ರೆಟ್ ಆಫ್ ದಿ ನಾಗಾಸ್, ದಿ ಓತ್ ಆಫ್ ದಿ ವಾಯುಪುತ್ರಾಸ್ ರಾಷ್ಟ್ರೀಯ ಬೆಸ್ಟ್ಸೆಲ್ಲರ್ಗಳಾಗಿವೆ ಈ ಮೂರು ಪುಸ್ತಕಗಳು ಒಟ್ಟಾಗಿ ಶಿವ ಟ್ರೈಲಾಜಿಯಾಗಿದೆ. ಶಿವ ಟ್ರೈಲಾಜಿ ಪುಸ್ತಕಗಳು ಭಾರತೀಯ ಪ್ರಕಟಣೆಯ ಇತಿಹಾಸದಲ್ಲೇ ಅತ್ಯಂತ ವೇಗವಾಗಿ ಮಾರಟವಾಗುತ್ತಿರುವ ಪುಸ್ತಕ ಸರಣಿಯಾಗಿ, ೨ ಮಿಲಿಯನ್ ಪ್ರತಿಗಳು ಪ್ರಕಟಣೆಯಾಗಿ ರೂ.೫೦೦ ಮಿಲಿಯನ್ರಷ್ಟು ಮಾರಾಟವಾಗಿವೆ. ೨೦೧೨ ಮತ್ತು ೨೦೧೩ರಲ್ಲಿ ಭಾರತದ ಟಾಪ್ ೧೦೦ ಸೆಲೆಬ್ರಿಟಿ ಪಟ್ಟಿಯಲ್ಲಿ ಫೋರ್ಬ್ಸ್ ಪುರವಣಿಯು ಇವರ ಹೆಸರನ್ನು ಪ್ರಕಟಿಸಿದೆ. == ಪುಸ್ತಕ ಅಡವಳಿಕೆಗಳು == ಇವರ ಪುಸ್ತಕಗಳನ್ನು ಭಾಷಾಂತರಿಸಲಾಗಿದೆ. ಇಮ್ಮಾರ್ಟಲ್ಸ್ ಆಫ್ ಮೆಲುಹ ೧೨ ಭಾಷೆಗಳಲ್ಲಿ ಲಭ್ಯವಿದೆ, ಸೀಕ್ರೆಟ್ ಆಫ್ ದಿ ನಾಗಾಸ್ ೭ ಭಾಷೆಗಳಲ್ಲಿ ಹಾಗು ಓತ್ ಆಫ್ ದಿ ವಾಯುಪುತ್ರಾಸ್ ೩ ಭಾಷೆಗಳಲ್ಲಿ.. ಇದರ ಜತೆಗೆ ಶಿವ ಟ್ರೈಲಾಜಿಯ ಚಿತ್ರೀಕರಣದ ಹಕ್ಕುಗಳನ್ನು ಕರಣ್ ಜೋಹರ್ರವರ ಧರ್ಮ ಪ್ರೊಡಕ್ಷನ್ಸ್ಗೆ ಮಾರಿದ್ದಾರೆ. == ಉಲ್ಲೇಖಗಳು ==